Mysuru Dasara 2026: ಮೈಸೂರು ದಸರಾ 2026ರ ಜಂಬೂ ಸವಾರಿಗೆ ಸಿದ್ಧತೆ ಜೋರಾಗಿದೆ. ಶಂಖಚಕ್ರ, ಗಂಡಭೇರುಂಡ ಸೇರಿದಂತೆ ಸಾಂಪ್ರದಾಯಿಕ ವಿನ್ಯಾಸಗಳಿಂದ ಆನೆಗಳನ್ನು ಅಲಂಕರಿಸಲಾಗುತ್ತಿದ್ದು, ದಸರಾ ಸಂಭ್ರಮ ಮತ್ತಷ್ಟು ಹೆಚ್ಚಿದೆ.


Mysuru Dasara 2026: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಅರಮನೆ ನಗರಿಯಲ್ಲಿ ದಸರಾ ಸಂಭ್ರಮ ಮನೆಮಾಡಿದ್ದು, ಜಂಬೂ ಸವಾರಿಯ ಪ್ರಮುಖ ಆಕರ್ಷಣೆಯಾದ ಆನೆಗಳನ್ನು ಸಜ್ಜುಗೊಳಿಸುವ ಕಾರ್ಯ ಭರದಿಂದ ಸಾಗಿದೆ.

ಆನೆಗಳ ಮೈಮೇಲೆ ಕಲಾವಿದರು ಬಣ್ಣ ಬಣ್ಣದ ಸಾಂಪ್ರದಾಯಿಕ ಚಿತ್ತಾರಗಳನ್ನು ಬಿಡಿಸುತ್ತಿದ್ದಾರೆ. ಶಂಖಚಕ್ರ, ಗಂಡಭೇರುಂಡ ಸೇರಿದಂತೆ ವಿವಿಧ ವಿನ್ಯಾಸಗಳು ಆನೆಗಳ ಅಂದವನ್ನು ಹೆಚ್ಚಿಸುತ್ತಿವೆ.

ಕಲಾವಿದ ನಾಗಲಿಂಗಪ್ಪ ಅವರ ತಂಡ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಪ್ರತಿ ಆನೆಗೆ ಚಿತ್ತಾರ ಬಿಡಿಸಲು ಸುಮಾರು ಒಂದರಿಂದ ಒಂದೂವರೆ ಗಂಟೆ ಸಮಯ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಜಂಬೂ ಸವಾರಿಯ ವೈಭವಕ್ಕೆ ಮತ್ತಷ್ಟು ಮೆರುಗು ನೀಡುವ ಈ ಕಲಾಕೃತಿಗಳು ಮೈಸೂರು ದಸರಾ ಸಂಭ್ರಮದ ಪ್ರಮುಖ ಆಕರ್ಷಣೆಯಾಗಿವೆ.