RRB Recruitment 2026: CEN 06/2026 ಅಡಿಯಲ್ಲಿ 3,477 ತಾತ್ಕಾಲಿಕ ಪದವೀಧರ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. 

ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಪಡೆಯಲು ಎದುರು ನೋಡುತ್ತಿರುವ ಪದವೀಧರರಿಗೆ ಸಿಹಿಸುದ್ದಿ ಸಿಕ್ಕಿದೆ. ರೈಲ್ವೆ ನೇಮಕಾತಿ ಮಂಡಳಿ RRB NTPC Graduate Level ನೇಮಕಾತಿಗೆ CEN 06/2026 ಅಧಿಸೂಚನೆ ಹೊರಡಿಸಿದ್ದು, ಒಟ್ಟು 3,477 ತಾತ್ಕಾಲಿಕ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ.


ಈ ನೇಮಕಾತಿಯಡಿ ವಿವಿಧ NTPC Graduate Level ಹುದ್ದೆಗಳು ಭರ್ತಿಯಾಗಲಿದ್ದು, ಹುದ್ದೆಗಳಿಗೆ ಅನುಗುಣವಾಗಿ 7ನೇ ಕೇಂದ್ರ ವೇತನ ಆಯೋಗದ Pay Level 5 ಮತ್ತು Level 6 ವೇತನ ಶ್ರೇಣಿ ಅನ್ವಯವಾಗಲಿದೆ.


ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅಕ್ಟೋಬರ್ 8, 2026ರಿಂದ ಆರಂಭವಾಗಿದ್ದು, ನವೆಂಬರ್ 6ರ ರಾತ್ರಿ 11:59ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಪ್ರಕ್ರಿಯೆ ಆನ್‌ಲೈನ್ ಮೂಲಕವೇ ನಡೆಯಲಿದೆ.


ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ RRB ಅಧಿಸೂಚನೆಯಲ್ಲಿ ವಯೋಮಿತಿ, ಶೈಕ್ಷಣಿಕ ಅರ್ಹತೆ, ಶುಲ್ಕ, ವೈದ್ಯಕೀಯ ಮಾನದಂಡ ಹಾಗೂ ಇತರೆ ನಿಯಮಗಳನ್ನು ಪರಿಶೀಲಿಸುವುದು ಅಗತ್ಯ.

ಪ್ರಸ್ತುತ ಪ್ರಕಟಿಸಿರುವ ಹುದ್ದೆಗಳ ಸಂಖ್ಯೆ ತಾತ್ಕಾಲಿಕವಾಗಿದ್ದು, ವಿವರವಾದ CENನಲ್ಲಿ ಅಂತಿಮ ಮಾಹಿತಿಯನ್ನು ನೀಡಲಾಗುತ್ತದೆ.