Ramayana 2 :ರಣಬೀರ್ ಕಪೂರ್ ಮತ್ತು ಯಶ್ ನಟನೆಯ ‘ರಾಮಾಯಣ 2’ ಚಿತ್ರದ ಬಿಡುಗಡೆ ದಿನಾಂಕವನ್ನು 2028ರ ದೀಪಾವಳಿಗೆ ಮುಂದೂಡಲಾಗಿದೆ ..

Ramayana 2 : ರಣಬೀರ್ ಕಪೂರ್ ಮತ್ತು ಯಶ್ ನಟನೆಯ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಎರಡನೇ ಭಾಗದ ಬಿಡುಗಡೆ ದಿನಾಂಕ ಮುಂದೂಡಿಕೆಯಾಗಿರುವ ಕುರಿತು ವರದಿಯಾಗಿದೆ. ಈ ಹಿಂದೆ 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ ಎಂದು ಯೋಜಿಸಲಾಗಿದ್ದ ಸಿನಿಮಾ, ಇದೀಗ 2028ರ ದೀಪಾವಳಿಗೆ ತೆರೆಗೆ ಬರಬಹುದು ಎಂದು ವರದಿಗಳು ತಿಳಿಸಿವೆ.


ನಿತೇಶ್ ತಿವಾರಿ ನಿರ್ದೇಶನದ ಈ ಬೃಹತ್ ಪೌರಾಣಿಕ ಚಿತ್ರವನ್ನು ಎರಡು ಭಾಗಗಳಲ್ಲಿ ನಿರ್ಮಿಸಲಾಗುತ್ತಿದೆ. ಮೊದಲ ಭಾಗವು 2026ರ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದ್ದು, ಎರಡನೇ ಭಾಗದ ಚಿತ್ರೀಕರಣಕ್ಕೆ ಹೆಚ್ಚಿನ ಸಮಯ ಬೇಕಾಗಿದೆ ಎನ್ನಲಾಗಿದೆ.


ವಿಶೇಷವಾಗಿ ರಾಮ–ರಾವಣ ಯುದ್ಧದ ದೃಶ್ಯಗಳು, ಆಕ್ಷನ್ ವಿನ್ಯಾಸ ಮತ್ತು ದೃಶ್ಯ ಪರಿಣಾಮಗಳ ಕೆಲಸಗಳಿಗೆ ಹೆಚ್ಚುವರಿ ಸಮಯ ಬೇಕಾಗಿರುವುದೇ ವಿಳಂಬಕ್ಕೆ ಕಾರಣ ಎಂದು ವರದಿಯಾಗಿದೆ.


ಆದರೆ, ‘ರಾಮಾಯಣ 2’ ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ನಿರ್ಮಾಪಕರು ಅಧಿಕೃತವಾಗಿ ದೃಢಪಡಿಸಿಲ್ಲ. ಮೊದಲ ಭಾಗದ ಕೊನೆಯಲ್ಲಿ ಹೊಸ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದೆ ಎಂಬ ಮಾಹಿತಿಯೂ ವರದಿಯಲ್ಲಿದೆ.


ಹೀಗಾಗಿ, ಯಶ್ ಮತ್ತು ರಣಬೀರ್ ಕಪೂರ್ ಅಭಿಮಾನಿಗಳು ಎರಡನೇ ಭಾಗದ ಅಧಿಕೃತ ಬಿಡುಗಡೆ ದಿನಾಂಕಕ್ಕಾಗಿ ಕಾಯಬೇಕಿದೆ.