PAVAGADA ಲಾರಿ ಚಾಲಕನ ಮೇಲೆ ಹಲ್ಲೆ ಆರೋಪ: ಹಣ, ಲಾರಿ ಕೀ ದೋಚಿದ ಯುವಕರು


ಸಿಮೆಂಟ್‌ ಸಾಗಿಸ್ತಿದ್ದ ಲಾರಿ ಚಾಲಕನ ಮೇಲೆ‌‌ ಮದ್ಯದ ನಶೆಯಲ್ಲಿ ಇದ್ದ ಸ್ಥಳೀಯ ಯುವಕರು ಹಲ್ಲೆ ಮಾಡಿ, ಲಾರಿಯಲ್ಲಿದ್ದ ದುಡ್ಡು ಎಗರಿಸಿದ್ದಲ್ಲದೇ, ಲಾರಿ ಕೀಯನ್ನು ಎತ್ತಿಕೊಂಡು ಎಸ್ಕೇಪ್‌ ಆಗಿರೋ ಆರೋಪ ಪ್ರಕರಣ ಪಾವಗಡದಲ್ಲಿ‌ ಬೆಳಕಿಗೆ ಬಂದಿದೆ.

 



ಹೌದು ಪಾವಗಡ ತಾಲೂಕಿನ ದೊಮ್ಮತಮರಿ ಗ್ರಾಮದ ಬಳಿ‌ ಲಾರಿ‌ ಚಾಲಕನ ಮೇಲೆ‌ ಹಲ್ಲೆ ನಡೆಸಲಾಗಿದ್ಯಂತೆ. ಸಿಮೇಂಟ್‌ ಲಾರಿ ಚಾಲಕ ವಸಂತ್‌ ಕುಮಾರ್‌ ಮೂಲತಃ ಪಾವಗಡ ತಾಲೂಕಿನ ದೊಮ್ಮತಮರಿ‌ ಬಳಿಯ ಬೋಡರ್ಹಳ್ಳಿ ಗ್ರಾಮದವರು.. ಈತ ನೆರೆಯ ಆಂಧ್ರಪ್ರದೇಶದಿಂದ ಮೈಸೂರಿಗೆ ಲಾರಿಯಲ್ಲಿ ಸೀಮೆಂಟ್‌ ಸಾಗಾಟ ಮಾಡ್ತಾ ಇದ್ರು. ಈ ಮಧ್ಯೆ ಪಾವಗಡ ತಾಲೂಕಿನ ದೊಮ್ಮತಮರಿ ಗ್ರಾಮದ ಬಳಿ ಲಾರಿ ಚಾಲಕ ಟೀ ಕುಡಿಯಲೆಂದು ರಸ್ತೆ ಬದಿ ಲಾರಿಯನ್ನು ನಿಲ್ಲಿಸಿ, ಟೀ ಅಂಗಡಿಗೆ ತೆರಳಿದ್ದ. ಇತ್ತ ಬೋಡರ್ಹಳ್ಳಿ ಗ್ರಾಮದ ನಿವಾಸಿಗಳಾದ ಪವನ್ ಮತ್ತು ಅಂಜಿ ಎಂಬುವವರು ಟೀ ಅಂಗಡಿ ಬಳಿ ಬಂದಿದ್ದರು. ಪವನ್‌ ಹಾಗೂ ಅಂಜಿ ಮದ್ಯಪಾನ ಮಾಡಿದ್ದು, ಟೀ ಅಂಗಡಿಯಲ್ಲಿ ಅವಾಚ್ಯ ಶಬ್ದಗಳ ಪ್ರಯೋಗ ಮಾಡಿ ಗಲಾಟೆ ಮಾಡ್ತಾ ಇದ್ರು. ಅಲ್ಲೇ ಇದ್ದ ಲಾರಿ ಚಾಲಕ ವಸಂತ್‌ ಕುಮಾರ್‌ ಯಾಕೆ ಹೀಗೆ ಕೆಟ್ಟದಾಗಿ ಮಾತನಾಡ್ತೀರಾ? ಅಂಗಡಿಯಲ್ಲಿ ಮಹಿಳೆಯರು ಇದ್ದಾರೆ ಹೀಗೆ ಮಾತನಾಡಬೇಡಿ ಎಂದಿದ್ದಾರೆ ಅಷ್ಟೇ. ಇದಕ್ಕೇ ಮತ್ತಷ್ಟು ಕೋಪಗೊಂಡ ಯುವಕರು ಗಲಾಟೆ ಮಾಡಿದ್ದಾರೆ.


ಇನ್ನು ಗಲಾಟೆ ಬಳಿ ಲಾರಿ ಬಳಿ ಬಂದ ಪವನ್‌ ಹಾಗೂ ಅಂಜು ಎಂಬ ಯುವಕರು ಲಾರಿಯ ಗ್ಲಾಸ್‌, ಮಿರರ್‌ ಹೊಡೆದು ಹಾಕಿದ್ರು. ಸಾಲದಕ್ಕೆ ಲಾರಿ ಚಾಲಕನ ಮೇಲೆ ಹಲ್ಲೆ ಮಾಡಿ ಲಾರಿಯಲ್ಲಿದ್ದ 30 ಸಾವಿರ ದುಡ್ಡು ಹಾಗೂ ಲಾರಿಯ ಕೀಯನ್ನು ಎಗರಿಸಿ ಎಸ್ಕೇಪ್‌ ಆಗಿದ್ದಾರೆ ಎಂದು ಆರೋಪಿಸಲಾಗಿದೆ. ಇತ್ತ ಲಾರಿ ಕೀ ಇಲ್ಲದೇ ಲಾರಿ ರಸ್ತೆ ಮಧ್ಯೆಯೇ ನಿಂತಿದ್ದು ಸಾರ್ವಜನಿಕರ‌‌ ಗಮನ ಸೆಳದಿತ್ತು, ಜೊತೆಗೆ  ಆತಂಕ ಕೂಡ ಉಂಟಾಗಿತ್ತು..  ಬಳಿಕ ವಸಂತ್ ಕುಮಾರ್ ಸ್ಥಳೀಯರೇ‌ ಆಗಿದ್ದರಿಂದ ಜನರಿಗೆ ಮಾಹಿತಿ‌ ತಿಳಿಸಿದ್ದಾರೆ.

ಸದ್ಯ ಈ ಸಂಬಂಧ ಪಾವಗಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆಯ ಬಳಿಕವಷ್ಟೇ ಘಟನೆಯ ಸಂಪೂರ್ಣ ಸತ್ಯಾಂಶ ಹೊರಬರಲಿದೆ.