Mysore : ಅರಮನೆಯ ವೈಭವ ಕಣ್ತುಂಬಿಕೊಂಡ ನಟಿಯೊಂದಿಗೆ ಫೋಟೋ ಹಾಗೂ ಸೆಲ್ಫಿಗೆ ಅಭಿಮಾನಿಗಳು ಮುಗಿಬಿದ್ದರು.
ಮೈಸೂರು: ದಸರಾ ಸಂಭ್ರಮಕ್ಕೆ ಸಜ್ಜಾಗುತ್ತಿರುವ ಮೈಸೂರು ಅರಮನೆಗೆ ನಟಿ ಕಾಜಲ್ ಅಗರ್ವಾಲ್ ಭೇಟಿ ನೀಡಿದ್ದಾರೆ.
ಅರಮನೆಗೆ ಆಗಮಿಸಿದ ನಟಿಯನ್ನು ಆತ್ಮೀಯವಾಗಿ ಸ್ವಾಗತಿಸಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಈ ವೇಳೆ ಅರಮನೆಯ ಇತಿಹಾಸ ಹಾಗೂ ಮಹತ್ವದ ಕುರಿತು ಅಧಿಕಾರಿಗಳು ಕಾಜಲ್ ಅಗರ್ವಾಲ್ ಅವರಿಗೆ ಮಾಹಿತಿ ನೀಡಿದರು.
ಅರಮನೆಯ ವೈಭವವನ್ನು ಕಣ್ತುಂಬಿಕೊಂಡ ನಟಿ, ಆತಿಥ್ಯಕ್ಕೆ ಧನ್ಯವಾದ ಅರ್ಪಿಸಿದರು. ಕಾಜಲ್ ಅಗರ್ವಾಲ್ ಅರಮನೆಗೆ ಭೇಟಿ ನೀಡಿರುವ ವಿಷಯ ತಿಳಿಯುತ್ತಿದ್ದಂತೆ ಪ್ರವಾಸಿಗರು ಹಾಗೂ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದರು.
ನೆಚ್ಚಿನ ನಟಿಯೊಂದಿಗೆ ಫೋಟೋ ಹಾಗೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಉತ್ಸಾಹ ತೋರಿದ್ದು, ಅರಮನೆ ಭೇಟಿಯ ವೇಳೆ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.