ರಾಜ್ಯದಲ್ಲಿ ಹಾಲಿನ ದರವನ್ನು ಲೀಟರ್‌ಗೆ ₹8 ಹೆಚ್ಚಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎನ್ನಲಾಗಿದೆ. 

 ರಾಜ್ಯದ ಜನತೆಗೆ ಸರ್ಕಾರದಿಂದ ಮತ್ತೊಂದು ಬೆಲೆ ಏರಿಕೆ ಶಾಕ್ ಎದುರಾಗುವ ಸಾಧ್ಯತೆ ಇದೆ. ಹಾಲಿನ ದರವನ್ನು ಲೀಟರ್‌ಗೆ ₹8 ಹೆಚ್ಚಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎನ್ನಲಾಗಿದೆ.


₹8 ದರ ಏರಿಕೆಯಲ್ಲಿ 80:20 ಅನುಪಾತದಂತೆ ₹6 ರೈತರಿಗೆ ಹಾಗೂ ₹2 ಹಾಲು ಒಕ್ಕೂಟಗಳಿಗೆ ನೀಡುವ ಸಾಧ್ಯತೆ ಇದೆ. ಬಹುತೇಕ ನವೆಂಬರ್ 1ರಿಂದ ಪರಿಷ್ಕೃತ ದರ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.


ಇದರ ಜೊತೆಗೆ ಬಸ್ ಟಿಕೆಟ್ ದರ ಹೆಚ್ಚಳಕ್ಕೂ ಸಂಪುಟ ಒಪ್ಪಿಗೆ ನೀಡಿದೆ ಎನ್ನಲಾಗಿದ್ದು, ಚುನಾವಣಾ ಆಯೋಗದ ಅನುಮತಿ ಪಡೆದ ಬಳಿಕ ಅಧಿಕೃತ ಘೋಷಣೆ ಮಾಡಲು ಸರ್ಕಾರ ನಿರ್ಧರಿಸಿದೆ.


ಹಾಲಿನ ದರ ₹8 ಏರಿಕೆಯಾದರೆ, ಪ್ರಸ್ತುತ ₹46 ಇರುವ ಟೋನ್ಡ್ ಹಾಲಿನ ದರ ₹54ಕ್ಕೆ, ₹50 ಇರುವ ಹಸುವಿನ ಹಾಲಿನ ದರ ₹58ಕ್ಕೆ ಹಾಗೂ ₹55 ಇರುವ ಸಮೃದ್ಧಿ ಹಾಲಿನ ದರ ₹64ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಅಧಿಕೃತ ದರಪಟ್ಟಿ ಘೋಷಣೆಯ ಬಳಿಕ ಅಂತಿಮ ಸ್ಪಷ್ಟತೆ ಸಿಗಲಿದೆ.