ಕೊಪ್ಪಳದ ಬಿ.ಟಿ. ಪಾಟೀಲ್ ನಗರದಲ್ಲಿ ಕೋತಿ ದಾಳಿ ನಡೆಸಿ ತಳ್ಳಿದ ಪರಿಣಾಮ 91 ವರ್ಷದ ನಜಮುನಿಸಾ ಬೇಗಂ ಮೃತಪಟ್ಟಿದ್ದಾರೆ. 

ಕೊಪ್ಪಳ: ಕೋತಿ ತಳ್ಳಿದ ಪರಿಣಾಮ ಕುಸಿದುಬಿದ್ದು 91 ವರ್ಷದ ವೃದ್ಧೆ ಮೃತಪಟ್ಟಿರುವ ಘಟನೆ ಕೊಪ್ಪಳದ ಬಿ.ಟಿ. ಪಾಟೀಲ್ ನಗರದಲ್ಲಿ ನಡೆದಿದೆ. ಮೃತರನ್ನು ನಜಮುನಿಸಾ ಬೇಗಂ (91) ಎಂದು ಗುರುತಿಸಲಾಗಿದೆ.


ನಜಮುನಿಸಾ ಬೇಗಂ ಅವರು ಮನೆ ಮುಂದೆ ನಿಂತುಕೊಂಡಿದ್ದ ವೇಳೆ ಕೋತಿಯೊಂದು ಅವರ ಮೇಲೆ ದಾಳಿ ನಡೆಸಿ ತಳ್ಳಿದೆ ಎನ್ನಲಾಗಿದೆ. ಈ ವೇಳೆ ಕೆಳಗೆ ಬಿದ್ದ ನಜಮುನಿಸಾ ಬೇಗಂ ಅವರ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವೃದ್ಧೆಯನ್ನು ಎಬ್ಬಿಸಲು ಬಂದ ಮಹಿಳೆಯ ಮೇಲೂ ಕೋತಿ ದಾಳಿ ನಡೆಸಿದೆ ಎನ್ನಲಾಗಿದೆ. ಇಡೀ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯಗಳು ಇದೀಗ ಗಮನ ಸೆಳೆದಿವೆ.