ತಮಿಳುನಾಡು ಸಿಎಂ ವಿಜಯ್ ಪುತ್ರ ಜೇಸನ್ ಸಂಜಯ್ ನಿರ್ದೇಶನದ ‘ಸಿಗ್ಮಾ’ ಸಿನಿಮಾದ ‘ಸುಲೋಚನ’ ಹಾಡಿಗೆ ಸಾನ್ವಿ ಸುದೀಪ್ ಧ್ವನಿ ನೀಡಿದ್ದಾರೆ.
ಮಸ್ತ್ ಮಲೈಕಾ’ ಹಾಡಿನ ಯಶಸ್ಸಿನ ಬಳಿಕ ಗಾಯಕಿ ಸಾನ್ವಿ ಸುದೀಪ್ ಇದೀಗ ಮತ್ತೊಂದು ಹೊಸ ಗೀತೆಗೆ ಧ್ವನಿ ನೀಡಿದ್ದಾರೆ. ‘ಸುಲೋಚನ’ ಎಂಬ ಹಾಡಿಗೆ ಸಾನ್ವಿ ಸುದೀಪ್ ಗಾಯನ ನೀಡಿದ್ದು, ಬಿಡುಗಡೆಯಾದ ಬೆನ್ನಲ್ಲೇ ಹಾಡು ಜನಪ್ರಿಯತೆ ಪಡೆದುಕೊಂಡಿದೆ.
ತಮಿಳುನಾಡು ಮುಖ್ಯಮಂತ್ರಿ ವಿಜಯ್ ಪುತ್ರ ಜೇಸನ್ ಸಂಜಯ್ ನಿರ್ದೇಶನದ ‘ಸಿಗ್ಮಾ’ ಸಿನಿಮಾದಲ್ಲಿ ಈ ಹಾಡು ಮೂಡಿಬಂದಿದೆ. ಸಿನಿಮಾದಲ್ಲಿ ಸಂದೀಪ್ ಕಿಶನ್ ಮತ್ತು ಫರಿಯಾ ಅಬ್ದುಲ್ಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಖ್ಯಾತ ಸಂಗೀತ ನಿರ್ದೇಶಕ ಎಸ್. ಥಮನ್ ‘ಸುಲೋಚನ’ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಾನ್ವಿ ಸುದೀಪ್ ಅವರ ಗಾಯನಕ್ಕೆ ಸಿನಿಪ್ರೇಕ್ಷಕರು ಹಾಗೂ ಸಂಗೀತಾಸಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.