BIGBOSS ಮನೆಯಲ್ಲಿ ಮೊದಲ ದಿನವೇ ಸ್ಪರ್ಧಿಗಳ ನಡುವೆ ಕಿರಿಕ್ ಶುರುವಾಗಿದೆ. ಫ್ಲೈಟ್‌ನಲ್ಲಿರುವ ವೈಷ್ಣವಿ ಮತ್ತು ಕಿರಣ್ ಶಾಸ್ತ್ರಿ ನಡುವೆ ಸ್ನಾನಕ್ಕೆ ಸಂಬಂಧಿಸಿದಂತೆ ವಾಕ್ಸಮರ ನಡೆದಿದೆ. ಅಸಲಿ ಕಾರಣವೇನು?

BIGBOSS ಮನೆಯ ಮೊದಲ ದಿನವೇ ಸ್ಪರ್ಧಿಗಳ ನಡುವೆ ಕಿರಿಕ್ ಜೋರಾಗಿದೆ. ಈಗಾಗಲೇ 8 ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರೆ, ಇನ್ನೂ 8 ಸ್ಪರ್ಧಿಗಳು ವಿಮಾನದಲ್ಲಿಯೇ ಉಳಿದಿದ್ದಾರೆ. ಈ ನಡುವೆ ವಿಮಾನದಲ್ಲಿರುವ ಸ್ಪರ್ಧಿಗಳ ನಡುವೆ ವಾಕ್ಸಮರ ಶುರುವಾಗಿದೆ.

ಬಿಗ್‌ಬಾಸ್ ನೀಡಿದ ಟಾಸ್ಕ್ ಮೂಲಕ ಕಳೆದ ಒಂದು ದಿನದಲ್ಲಿ ಎಂಟು ಸ್ಪರ್ಧಿಗಳನ್ನು ಮನೆಯೊಳಗೆ ಕಳುಹಿಸಲಾಗಿದೆ. ಆದರೆ ಉಳಿದ ಸ್ಪರ್ಧಿಗಳು ಇನ್ನೂ ಫ್ಲೈಟ್‌ನಲ್ಲೇ ಇದ್ದಾರೆ.

ಈ ನಡುವೆ ವೈಷ್ಣವಿ ಹಾಗೂ ಕಿರಣ್ ಶಾಸ್ತ್ರಿ ನಡುವೆ ಸ್ನಾನಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಈ ಕಿರಿಕ್‌ನ ಝಲಕ್ ಕಾಣಿಸಿಕೊಂಡಿದೆ.


ಫ್ಲೈಟ್‌ನಲ್ಲಿರುವ ಸ್ಪರ್ಧಿಗಳಿಗೆ ಸ್ನಾನ ಮಾಡಲು ಬಿಗ್‌ಬಾಸ್ ಒಂದೂವರೆ ಗಂಟೆ ಸಮಯ ನೀಡಿದ್ದರು. ಆದರೆ ಸ್ನಾನಕ್ಕೆ ತೆರಳಿದ್ದ ಕಿರಣ್ ಶಾಸ್ತ್ರಿ ಅವರು ಬರೋಬ್ಬರಿ ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಇದರಿಂದ ಉಳಿದ ಸ್ಪರ್ಧಿಗಳು ಅಸಮಾಧಾನಗೊಂಡಿದ್ದಾರೆ. ಆದರೆ ಕಿರಣ್ ಶಾಸ್ತ್ರಿ ಮಾತ್ರ ಇದನ್ನು ಹೆಚ್ಚು ಗಂಭೀರವಾಗಿ ಪರಿಗಣಿಸದೆ ಆರಾಮವಾಗಿ ಫ್ಲೈಟ್‌ಗೆ ಮರಳುತ್ತಿದ್ದಂತೆ ವೈಷ್ಣವಿ ತಿರುಗಿಬಿದ್ದಿದ್ದಾರೆ.

‘ಸ್ನಾನಕ್ಕೆ ಇಷ್ಟು ಸಮಯ ಬೇಕಾ?’ ಎಂಬ ವಿಚಾರವೇ ಇಬ್ಬರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದ್ದು, ಬಿಗ್‌ಬಾಸ್ ಮನೆಯ ಮೊದಲ ದಿನವೇ ಫ್ಲೈಟ್‌ನಲ್ಲಿ ವಾರ್ ಸೈರನ್ ಮೊಳಗಿದಂತಾಗಿದೆ.

ಇದೀಗ ವೈಷ್ಣವಿ ಮತ್ತು ಕಿರಣ್ ಶಾಸ್ತ್ರಿ ನಡುವಿನ ಈ ‘ಜಳಕ’ದ ಜಗಳ ಬಿಗ್‌ಬಾಸ್ ಮನೆಯಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವು ಪಡೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.