ಬೆಂಗಳೂರಿನ ಯಲಹಂಕ ನ್ಯೂಟೌನ್ ಬಸ್ ನಿಲ್ದಾಣದ ಬಳಿ ಕುಡಿದ ವ್ಯಕ್ತಿಯೊಬ್ಬ BMTC ಬಸ್ ತಡೆದು ರಸ್ತೆ ಮಧ್ಯೆ ಮಲಗಿ ಹೈಡ್ರಾಮಾ ಮಾಡಿದ್ದಾನೆ. ಘಟನೆಯಿಂದ ಟ್ರಾಫಿಕ್ ಜಾಮ್ ಉಂಟಾಗಿದೆ.
ಯಲಹಂಕದಲ್ಲಿ ಕುಡಿದ ವ್ಯಕ್ತಿಯೊಬ್ಬ ಬಿಎಂಟಿಸಿ ಬಸ್ಗಳನ್ನು ತಡೆದು ರಸ್ತೆ ಮಧ್ಯೆ ಮಲಗಿ ಹೈಡ್ರಾಮಾ ಮಾಡಿರುವ ಘಟನೆ ನಡೆದಿದೆ. ಯಲಹಂಕ ನ್ಯೂಟೌನ್ ಬಸ್ ನಿಲ್ದಾಣದ ಬಳಿ ಸೆಪ್ಟೆಂಬರ್ 16ರಂದು ಈ ಘಟನೆ ನಡೆದಿದೆ.
ಕುಡಿದ ವ್ಯಕ್ತಿ ಮೊದಲು ಬಿಎಂಟಿಸಿ ಬಸ್ಗಳ ಸಂಚಾರಕ್ಕೆ ಅಡ್ಡಿಪಡಿಸಿದ್ದು, ಬಳಿಕ ರಸ್ತೆ ಮಧ್ಯೆಯೇ ಮಲಗಿ ಹಾಗೂ ಕುಳಿತು ಹೈಡ್ರಾಮಾ ಮಾಡಿದ್ದಾನೆ. ಇದರಿಂದ ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿ, ಪ್ರಯಾಣಿಕರು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ.
ನಂತರ ಬಸ್ನಲ್ಲಿದ್ದ ಪ್ರಯಾಣಿಕರು ಹಾಗೂ ಸಾರ್ವಜನಿಕರು ಆತನಿಗೆ ಎಚ್ಚರಿಕೆ ನೀಡಿ ರಸ್ತೆಯಿಂದ ತೆರಳುವಂತೆ ಮಾಡಿದ್ದಾರೆ. ಕುಡುಕನ ಈ ಅವಾಂತರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.