ಗೌರಿ-ಗಣೇಶ ಹಬ್ಬಕ್ಕೆ ಬೆಲೆ ಏರಿಕೆ ಶಾಕ್; ಹೂವು, ಹಣ್ಣು, ತರಕಾರಿ, ದಿನಸಿ ದರ ಗಗನಕ್ಕೆ
ಸಿಲಿಕಾನ್ ಸಿಟಿಯಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೂವು, ಹಣ್ಣು, ತರಕಾರಿ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಹೂವು ಹಾಗೂ ತೋರಣಗಳ ಬೆಲೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, ಹಬ್ಬದ ಖರೀದಿಗೆ ಬಂದಿರುವ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಹೂವು ಮತ್ತು ತೋರಣಗಳ ದರ
- ಸೇವಂತಿಗೆ: ₹350 ಪ್ರತಿ ಕೆಜಿ
- ತಾವರೆ ಹೂವು: ಜೋಡಿಗೆ ₹50
- ಗುಲಾಬಿ ಬಟನ್: ₹350 ಪ್ರತಿ ಕೆಜಿ
- ಮಿಕ್ಸ್ ಹೂವು: ₹300–₹400 ಪ್ರತಿ ಕೆಜಿ
- ಕನಕಾಂಬರ: ₹2,000 ಪ್ರತಿ ಕೆಜಿ / 50 ಮೊಳ
- ಮಲ್ಲಿಗೆ: ₹1,000 ಪ್ರತಿ ಕೆಜಿ / 50 ಮೊಳ
- ತುಳಸಿ ತೋರಣ: ₹60 ಮೊಳ
- ಮಾವಿನ ಎಲೆ: ₹10–₹30 ಕಟ್ಟು
- ಬಾಳೆ ದಿಂಡು: ಜೋಡಿಗೆ ₹50–₹80
ಹಣ್ಣುಗಳ ದರ
- ಸೇಬು: ₹200–₹300 ಪ್ರತಿ ಕೆಜಿ
- ದಾಳಿಂಬೆ: ₹100–₹250
- ಸಪೋಟ: ₹150–₹200
- ದ್ರಾಕ್ಷಿ: ₹120–₹150
- ಮೂಸಂಬಿ ಹಾಗೂ ಕಿತ್ತಳೆ: ₹80–₹100
- ಬಾಳೆಹಣ್ಣು: ₹80–₹150
ತರಕಾರಿ ದರ
- ಈರುಳ್ಳಿ: ₹60–₹70 ಪ್ರತಿ ಕೆಜಿ
- ಹಸಿಮೆಣಸಿನಕಾಯಿ: ₹40–₹60
- ಬೀಟ್ರೂಟ್: ₹50–₹60
- ಬೆಳ್ಳುಳ್ಳಿ: ₹200–₹250
- ನಿಂಬೆಹಣ್ಣು: ಒಂದಕ್ಕೆ ₹8–₹15
- ನುಗ್ಗೆಕಾಯಿ: ಒಂದಕ್ಕೆ ₹10–₹15
- ಕ್ಯಾಪ್ಸಿಕಂ: ₹50–₹70
- ಬಟಾಣಿ: ₹140–₹160
ದಿನಸಿ ದರ
- ಬೆಲ್ಲ: ₹50–₹55
- ತೊಗರಿಬೇಳೆ: ₹160–₹170
- ಹುರಿಗಡಲೆ: ₹150–₹180
- ಕಡಲೆಬೀಜ: ₹100–₹140
- ಸಕ್ಕರೆ: ₹60–₹80
- ಚಿರೋಟಿ ರವೆ: ₹90–₹100
- ಮೈದಾ ಹಿಟ್ಟು: ₹45–₹50
- ಕಡಲೆಕಾಳು: ₹90–₹100
- ಅಡುಗೆ ಎಣ್ಣೆ: ಲೀಟರ್ಗೆ ₹190–₹210
ಹಬ್ಬದ ಖರೀದಿಗೆ ಜನರು ಮಾರುಕಟ್ಟೆಯತ್ತ ಮುಖ ಮಾಡಿರುವ ಬೆನ್ನಲ್ಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವುದು ಗ್ರಾಹಕರಿಗೆ ಹೆಚ್ಚುವರಿ ಹೊರೆಯಾಗಿದೆ.