ನಿನ್ನೆ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು, ಸೆಪ್ಟೆಂಬರ್ 25ರಂದು ಅಲ್ಪ ಏರಿಕೆ ಕಂಡಿದೆ. 22 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್‌ಗೆ ₹15 ಏರಿಕೆಯಾಗಿದ್ದು, ₹13,995ರಿಂದ ₹14,010ಕ್ಕೆ ತಲುಪಿದೆ. ಇದರೊಂದಿಗೆ ಆಭರಣ ಚಿನ್ನದ ಬೆಲೆ ಮತ್ತೆ ₹14,000 ಗಡಿ ದಾಟಿದೆ.


24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ಗ್ರಾಮ್‌ಗೆ ₹15,284 ಇದ್ದು, 18 ಕ್ಯಾರಟ್ ಚಿನ್ನದ ಬೆಲೆ ₹11,463 ಇದೆ. 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,40,100 ಆಗಿದ್ದರೆ, 24 ಕ್ಯಾರಟ್ ಚಿನ್ನದ ಬೆಲೆ ₹1,52,840 ಇದೆ.

ಬೆಳ್ಳಿ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆ ಕಂಡುಬಂದಿಲ್ಲ. ಬೆಂಗಳೂರಿನಲ್ಲಿ ಬೆಳ್ಳಿ ಗ್ರಾಮ್‌ಗೆ ₹245 ಇದ್ದು, 100 ಗ್ರಾಂ ಬೆಳ್ಳಿ ₹24,500ಕ್ಕೆ ಲಭ್ಯವಿದೆ. ಚೆನ್ನೈ ಮತ್ತು ಕೇರಳದಲ್ಲಿ ಗ್ರಾಮ್‌ಗೆ ₹250ರಷ್ಟಿದೆ.



ಸೆಪ್ಟೆಂಬರ್ 25ರ ಪ್ರಮುಖ ಚಿನ್ನ-ಬೆಳ್ಳಿ ದರ

  • 24 ಕ್ಯಾರಟ್ ಚಿನ್ನ: ₹15,284/ಗ್ರಾಂ
  • 22 ಕ್ಯಾರಟ್ ಚಿನ್ನ: ₹14,010/ಗ್ರಾಂ
  • 18 ಕ್ಯಾರಟ್ ಚಿನ್ನ: ₹11,463/ಗ್ರಾಂ
  • ಬೆಳ್ಳಿ: ₹245/ಗ್ರಾಂ
  • 10 ಗ್ರಾಂ 22K ಚಿನ್ನ: ₹1,40,100
  • 10 ಗ್ರಾಂ 24K ಚಿನ್ನ: ₹1,52,840
  • 100 ಗ್ರಾಂ ಬೆಳ್ಳಿ: ₹24,500 


ಪ್ರಮುಖ ನಗರಗಳಲ್ಲಿ 22K ಚಿನ್ನದ ದರ

  • ಬೆಂಗಳೂರು: ₹14,010
  • ಚೆನ್ನೈ: ₹14,010
  • ಮುಂಬೈ: ₹14,010
  • ದೆಹಲಿ: ₹14,025
  • ಕೋಲ್ಕತಾ: ₹14,010
  • ಕೇರಳ: ₹14,010
  • ಅಹ್ಮದಾಬಾದ್: ₹14,015
  • ಜೈಪುರ: ₹14,025
  • ಲಕ್ನೋ: ₹14,025
  • ಭುವನೇಶ್ವರ: ₹14,010

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ ಗ್ರಾಮ್‌ಗೆ ಸುಮಾರು 137.52 ಡಾಲರ್ ಮತ್ತು ಸ್ಪಾಟ್ ಸಿಲ್ವರ್ ಗ್ರಾಮ್‌ಗೆ 2.052 ಡಾಲರ್ ಎಂದು ನೀಡಲಾಗಿದೆ.