ಅಕ್ಟೋಬರ್ 8ರಂದು ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 22 ಕ್ಯಾರಟ್ ಚಿನ್ನ ಗ್ರಾಮ್ಗೆ ₹13,710, 24 ಕ್ಯಾರಟ್ ₹14,957 ಹಾಗೂ ಬೆಂಗಳೂರಿನಲ್ಲಿ ಬೆಳ್ಳಿ ಗ್ರಾಮ್ಗೆ ₹235 ಇದೆ.
ಅಕ್ಟೋಬರ್ 8ರಂದು ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಯಥಾಸ್ಥಿತಿಯಲ್ಲಿವೆ. ನಿನ್ನೆಯ ದರವೇ ಇಂದೂ ಮುಂದುವರಿದಿದೆ.
ಸದ್ಯ 22 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್ಗೆ ₹13,710 ಇದ್ದು, 10 ಗ್ರಾಂಗೆ ₹1,37,100 ಇದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ಗ್ರಾಮ್ಗೆ ₹14,957, ಅಂದರೆ 10 ಗ್ರಾಂಗೆ ₹1,49,570 ಇದೆ.
18 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್ಗೆ ₹11,218 ಇದ್ದರೆ, ಬೆಳ್ಳಿ ಬೆಲೆ ಬೆಂಗಳೂರಿನಲ್ಲಿ ಗ್ರಾಮ್ಗೆ ₹235 ಹಾಗೂ 100 ಗ್ರಾಂಗೆ ₹23,500 ಇದೆ. ಚೆನ್ನೈ ಮತ್ತು ಕೇರಳದಲ್ಲಿ ಬೆಳ್ಳಿ ಗ್ರಾಮ್ಗೆ ₹245ರಷ್ಟಿದೆ.
ವಿವಿಧ ನಗರಗಳ ಪೈಕಿ ದೆಹಲಿ, ಜೈಪುರ ಮತ್ತು ಲಕ್ನೋದಲ್ಲಿ 22 ಕ್ಯಾರಟ್ ಚಿನ್ನ ಗ್ರಾಮ್ಗೆ ₹13,725 ಇದ್ದರೆ, ಅಹ್ಮದಾಬಾದ್ನಲ್ಲಿ ₹13,715 ಇದೆ. ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತಾ ಸೇರಿದಂತೆ ಹಲವು ನಗರಗಳಲ್ಲಿ ₹13,710 ದರ ಇದೆ.
ಇನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ ಗ್ರಾಮ್ಗೆ ಸುಮಾರು 132.89 ಡಾಲರ್ ಹಾಗೂ ಸ್ಪಾಟ್ ಸಿಲ್ವರ್ ಗ್ರಾಮ್ಗೆ 1.930 ಡಾಲರ್ ದರದಲ್ಲಿದೆ.
ವಿದೇಶಗಳ ಹಲವು ಮಾರುಕಟ್ಟೆಗಳಲ್ಲಿ ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿದೆ ಎಂದು ವರದಿಯಾಗಿದೆ.