Gold & Silver Rate :  ಅಕ್ಟೋಬರ್ 7, 2026ರಂದು ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದೆ. 22 ಕ್ಯಾರಟ್ ಚಿನ್ನದ ದರ ಗ್ರಾಮ್‌ಗೆ ₹13,710ಕ್ಕೆ ತಲುಪಿದ್ದು, 24 ಕ್ಯಾರಟ್ ಚಿನ್ನ ₹14,957 ಹಾಗೂ ಬೆಂಗಳೂರಿನಲ್ಲಿ ಬೆಳ್ಳಿ ಗ್ರಾಮ್‌ಗೆ ₹235 ಇದೆ.

 ಚಿನ್ನದ ಬೆಲೆಯಲ್ಲಿ ಇಂದು ತುಸು ಏರಿಕೆ ಕಂಡುಬಂದಿದ್ದು, ಬೆಳ್ಳಿ ದರ ಬಹುತೇಕ ಯಥಾಸ್ಥಿತಿಯಲ್ಲಿದೆ. ಅಕ್ಟೋಬರ್ 7ರಂದು 22 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್‌ಗೆ ₹50 ಏರಿಕೆಯಾಗಿ ₹13,710ಕ್ಕೆ ತಲುಪಿದೆ.


24 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್‌ಗೆ ₹14,957 ಇದ್ದರೆ, 18 ಕ್ಯಾರಟ್ ಚಿನ್ನದ ದರ ₹11,218 ಇದೆ. ಅಂದರೆ 10 ಗ್ರಾಂ 22 ಕ್ಯಾರಟ್ ಚಿನ್ನ ₹1,37,100 ಹಾಗೂ 24 ಕ್ಯಾರಟ್ ಚಿನ್ನ ₹1,49,570ಕ್ಕೆ ಲಭ್ಯವಿದೆ.


ಇನ್ನು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಗ್ರಾಮ್‌ಗೆ ₹235 ಇದ್ದು, 100 ಗ್ರಾಂ ಬೆಳ್ಳಿ ₹23,500ಕ್ಕೆ ಇದೆ. ಚೆನ್ನೈ ಮತ್ತು ಕೇರಳದಲ್ಲಿ ಬೆಳ್ಳಿ ದರ ಗ್ರಾಮ್‌ಗೆ ₹245ರಷ್ಟಿದೆ.


ವಿವಿಧ ನಗರಗಳ ಪೈಕಿ ದೆಹಲಿ, ಜೈಪುರ ಹಾಗೂ ಲಕ್ನೋದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್‌ಗೆ ₹13,725 ಇದ್ದರೆ, ಅಹ್ಮದಾಬಾದ್‌ನಲ್ಲಿ ₹13,715 ಇದೆ. ಉಳಿದ ಹಲವು ನಗರಗಳಲ್ಲಿ ಗ್ರಾಮ್‌ಗೆ ₹13,710ರಷ್ಟಿದೆ.


ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮಾರುಕಟ್ಟೆ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುವ ಸಾಧ್ಯತೆ ಇರುವುದರಿಂದ ಖರೀದಿಗೂ ಮುನ್ನ ಸ್ಥಳೀಯ ಜುವೆಲ್ಲರಿ ದರವನ್ನು ಪರಿಶೀಲಿಸುವುದು ಸೂಕ್ತ.