ಅಜಯ್ ದೇವಗನ್ ಅಭಿನಯದ ‘ದೃಶ್ಯಂ 3’ ಜಾಗತಿಕವಾಗಿ ₹500 ಕೋಟಿಗೂ ಅಧಿಕ ಗಳಿಕೆ ಮಾಡಿದೆ ಎಂಬ ವರದಿಯ ನಡುವೆ, ನಾಲ್ಕನೇ ಭಾಗ ಮಾಡುವುದಿಲ್ಲ ಎಂದು ನಿರ್ದೇಶಕ ಅಭಿಷೇಕ್ ಪಾಠಕ್ ಸ್ಪಷ್ಟಪಡಿಸಿದ್ದಾರೆ.

ಬಾಲಿವುಡ್ ನಟ ಅಜಯ್ ದೇವಗನ್ ಅಭಿನಯದ ‘ದೃಶ್ಯಂ 3’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡಿದೆ ಎಂದು ವರದಿಯಾಗಿದೆ. ಸ್ಯಾಕ್ನಿಲ್ಕ್ ವರದಿ ಉಲ್ಲೇಖದ ಪ್ರಕಾರ, ಸಿನಿಮಾ ವಿಶ್ವಾದ್ಯಂತ ₹501.80 ಕೋಟಿ ಗಳಿಸಿದ್ದು, ಭಾರತದಲ್ಲಿ ₹323.50 ಕೋಟಿ ನೆಟ್ ಕಲೆಕ್ಷನ್ ದಾಖಲಿಸಿದೆ.


ನಾಲ್ಕನೇ ಭಾಗಕ್ಕೆ ಬ್ರೇಕ್! ಚಿತ್ರದ ಯಶಸ್ಸಿನ ನಡುವೆಯೂ ‘ದೃಶ್ಯಂ 4’ ನಿರ್ಮಿಸುವ ಉದ್ದೇಶವಿಲ್ಲ ಎಂದು ನಿರ್ದೇಶಕ ಅಭಿಷೇಕ್ ಪಾಠಕ್ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಕಥೆಯು ಸಹಜ ಅಂತ್ಯ ತಲುಪಿದ್ದು, ಇದೇ ಫ್ರಾಂಚೈಸಿಗೆ ಸೂಕ್ತವಾದ ಮುಕ್ತಾಯ ಎಂಬುದು ಅವರ ಅಭಿಪ್ರಾಯ.


ಕಥೆ ಮುಂದುವರಿಸುವುದರಲ್ಲಿ ಅರ್ಥವಿಲ್ಲ: ಕಥೆಯನ್ನು ಮತ್ತಷ್ಟು ವಿಸ್ತರಿಸಲು ಅವಕಾಶಗಳಿದ್ದರೂ, ಅದರಿಂದ ಚಿತ್ರದ ಅಂತ್ಯದ ಪರಿಣಾಮ ಹಾಳಾಗಬಹುದು ಎಂದು ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ. ಪ್ರೇಕ್ಷಕರಿಂದ ಸಿಗುತ್ತಿರುವ ಪ್ರೀತಿ ಮತ್ತು ಮೆಚ್ಚುಗೆಗೆ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.


‘ದೃಶ್ಯಂ’ ಸರಣಿಯ ಅಭಿಮಾನಿಗಳಿಗೆ ನಾಲ್ಕನೇ ಭಾಗದ ನಿರೀಕ್ಷೆ ಇದ್ದರೂ, ಸದ್ಯದ ಹೇಳಿಕೆಯ ಪ್ರಕಾರ ಮೂರನೇ ಭಾಗವೇ ಕಥೆಯ ಅಂತಿಮ ಅಧ್ಯಾಯವಾಗುವ ಸಾಧ್ಯತೆಯಿದೆ