BIGBOSS KANNADA 13  : ಬಿಗ್‌ಬಾಸ್‌ ಕನ್ನಡ ಮನೆಯಲ್ಲಿ ಟಾಸ್ಕ್‌ ಕಾವು ಜೋರಾಗುತ್ತಿದ್ದಂತೆ ಸ್ಪರ್ಧಿಗಳ ನಡುವಿನ ಮಾತಿನ ಚಕಮಕಿ ತಾರಕಕ್ಕೇರಿದೆ.

ಬಿಗ್‌ಬಾಸ್‌ ಕನ್ನಡ ಮನೆಯಲ್ಲಿ ಟಾಸ್ಕ್‌ ಕಾವೇರುತ್ತಿದ್ದಂತೆ, ಸ್ಪರ್ಧಿಗಳ ನಡುವಿನ ಮಾತಿನ ಚಕಮಕಿ ಕೂಡ ತಾರಕಕ್ಕೇರಿದೆ! ಕಿರಣ್‌ ಶಾಸ್ತ್ರಿ ಹಾಗೂ ಆಸಿಯಾ ಫಿರ್ದೋಸ್‌ ನಡುವೆ ನಡೆದ ಮಾತಿನ ಸಮರ ಇಡೀ ಮನೆಯನ್ನೇ ದಂಗಾಗಿಸಿದೆ.


ಕೋ-ಪೈಲಟ್ ಆಯ್ಕೆ ಟಾಸ್ಕ್ ವೇಳೆ, ರೂಲ್ಸ್‌ ಪಾಲನೆ ವಿಚಾರವಾಗಿ ಕಿರಣ್‌ ವಿರುದ್ಧ ಆಸಿಯಾ ತಮ್ಮ ಅಸಮಾಧಾನ ಹೊರಹಾಕಿದರು. "ನೀವೇ ರೂಲ್ಸ್‌ ಫಾಲೋ ಮಾಡಿಲ್ಲ ಅಂದ್ಮೇಲೆ, ಯಾವ ಭರವಸೆ ಮೇಲೆ ನಾನು ನಿಮಗೆ ವೋಟ್ ಮಾಡಲಿ?" ಎಂದು ಪ್ರಶ್ನಿಸಿದರು.

ಅಷ್ಟೇ ಅಲ್ಲದೆ, "ನನ್ನನ್ನು ಮೈಂಡ್‌ಗೇಮ್‌ನಲ್ಲಿ ಸೋಲಿಸೋಕೆ ಸಾಧ್ಯವೇ ಇಲ್ಲ" ಎಂದು ಕಿರಣ್‌ ಹೇಳಿದ ಮಾತು ಇಡೀ ಮನೆಯಲ್ಲಿ ಕಿಡಿ ಹಚ್ಚಿತು. ಇದಕ್ಕೆ ಯಶಸ್‌ ಕೃಷ್ಣ ಕೂಡ ಟಾಂಗ್‌ ನೀಡಿದರು. ಮಾತಿನ ಚಕಮಕಿ ಮುಂದುವರಿದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.


ಕೋಪಗೊಂಡ ಆಸಿಯಾ ಫಿರ್ದೋಸ್‌, ಕಿರಣ್‌ ಕಡೆ ಕೈ ತೋರಿಸುತ್ತಾ "ಹೇ, ಮುಚ್ಚೋ ಬಾಯಿ… ಎಲ್ಲದಕ್ಕೂ ನಾನು, ನಾನು, ನಾನು ಎನ್ನುತ್ತೀರಿ, ಸುಮ್ಮನಿರಬೇಕು!" ಎಂದು ಖಡಕ್‌ ಎಚ್ಚರಿಕೆ ನೀಡಿದರು. ಆಸಿಯಾ ಅವರ ಈ ಬಿರುಸಿನ ಆರ್ಭಟಕ್ಕೆ ಕಿರಣ್‌ ಶಾಸ್ತ್ರಿ ಸೇರಿದಂತೆ ಸುತ್ತಮುತ್ತಲಿದ್ದ ಎಲ್ಲಾ ಸ್ಪರ್ಧಿಗಳು ಕೆಲಕಾಲ ಶಾಕ್‌ ಆಗಿ ಸೈಲೆಂಟ್‌ ಆದರು!


ಟಾಸ್ಕ್‌ಗಿಂತಲೂ ಹೆಚ್ಚಾಗಿ ಸ್ಪರ್ಧಿಗಳ ಈ ಮುಖಾಮುಖಿ ಕಿತ್ತಾಟ ಬಿಗ್‌ಬಾಸ್‌ ಮನೆಯಲ್ಲಿ ಈಗ ದೊಡ್ಡ ಸದ್ದು ಮಾಡುತ್ತಿದೆ. ಮುಂದಿನ ಎಪಿಸೋಡ್‌ನಲ್ಲಿ ಇದರ ಪರಿಣಾಮವೇನಾಗಲಿದೆ ಎಂಬುದನ್ನು ಕಾದು ನೋಡಬೇಕು!

ಮನೆಯಲ್ಲಿನ ಈ ರೋಚಕ ಬೆಳವಣಿಗೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ ತಿಳಿಸಿ!