ಬಿಗ್ ಬಾಸ್ ಕನ್ನಡ ಸೀಸನ್ 13ರ ಮೊದಲ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಆಸಿಯಾ ವಿರುದ್ಧ ಗೆಲುವು ಸಾಧಿಸಿದ ಸಂಗೀತಾ ಭಟ್, ದೊಡ್ಮನೆಯ ಮೊದಲ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 13ರ ಮೊದಲ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸಂಗೀತಾ ಭಟ್ ಗೆಲುವು ಸಾಧಿಸಿದ್ದಾರೆ. ಆಸಿಯಾ ವಿರುದ್ಧ ಪೈಪೋಟಿ ನಡೆಸಿದ ಸಂಗೀತಾ, ಗೆಲುವಿನ ಮೂಲಕ ದೊಡ್ಮನೆಯ ಮೊದಲ ಕ್ಯಾಪ್ಟನ್ ಆಗಿ ಕಿರೀಟ ಧರಿಸಿದ್ದಾರೆ.

ಬಿಗ್ ಬಾಸ್ ನೀಡಿದ್ದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸಂಗೀತಾ ಮತ್ತು ಆಸಿಯಾ ನಡುವೆ ತೀವ್ರ ಪೈಪೋಟಿ ನಡೆಯಿತು. ದೊಡ್ಮನೆಗೆ ಮೊದಲ ಪೈಲಟ್ ಆಗಿ ಆಯ್ಕೆಯಾಗಿದ್ದ ಸಂಗೀತಾ, ಕೋ-ಪೈಲಟ್ ಆಗಿ ಆಸಿಯಾ ಅವರನ್ನು ಆಯ್ಕೆ ಮಾಡಿಕೊಂಡಿದ್ದರು. ಇದೀಗ ಕ್ಯಾಪ್ಟನ್ ಆಗುವ ಸ್ಪರ್ಧೆಯಲ್ಲೇ ಇಬ್ಬರೂ ಮುಖಾಮುಖಿಯಾಗಿದ್ದರು.


ಏನಿತ್ತು ಕ್ಯಾಪ್ಟನ್ಸಿ ಟಾಸ್ಕ್?

ಟಾಸ್ಕ್‌ನಲ್ಲಿ ಅಭ್ಯರ್ಥಿಗಳಾದ ಸಂಗೀತಾ ಮತ್ತು ಆಸಿಯಾ ಅವರನ್ನು ಏಣಿಗೆ ಕಟ್ಟಿದ ಹಗ್ಗದ ಮೂಲಕ ಸಹಾಯಕರು ಬೀಳದಂತೆ ಸಂಭಾಳಿಸಬೇಕಿತ್ತು. ಬಳಿಕ ಅಂತಿಮ ಸ್ಥಾನದಲ್ಲಿದ್ದ ಬಿಲ್ಲೆಗಳ ಚೀಲವನ್ನು ಪಡೆದುಕೊಂಡು ಮತ್ತೆ ಮೂಲ ಸ್ಥಾನಕ್ಕೆ ಮರಳಬೇಕಿತ್ತು.

ನಂತರ ಸಂಗ್ರಹಿಸಿದ ಬಿಲ್ಲೆಗಳನ್ನು ಸಾಲಾಗಿ ಜೋಡಿಸಬೇಕಿತ್ತು. ಎದುರಾಳಿ ಅಭ್ಯರ್ಥಿಯ ಫೋಟೋ ಇರುವ ಬಿಲ್ಲೆಗಳನ್ನು ಈಜುಕೊಳಕ್ಕೆ ಬೀಳಿಸುವ ಸ್ಪರ್ಧಿ ಕ್ಯಾಪ್ಟನ್ ಆಗಿ ಆಯ್ಕೆಯಾಗುವ ನಿಯಮವನ್ನು ಬಿಗ್ ಬಾಸ್ ನೀಡಿದ್ದರು.


ಈ ಟಾಸ್ಕ್‌ನಲ್ಲಿ ಸಂಗೀತಾ ಭಟ್ ಅವರು ಆಸಿಯಾ ವಿರುದ್ಧ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಬಿಗ್ ಬಾಸ್ ಕನ್ನಡ ಸೀಸನ್ 13ರ ಮೊದಲ ಕ್ಯಾಪ್ಟನ್ ಆಗಿ ಸಂಗೀತಾ ಭಟ್ ಆಯ್ಕೆಯಾಗಿದ್ದಾರೆ.