BIGBOSS ಸೀಸನ್‌ನಲ್ಲಿ ಮೊದಲ ಟಾಸ್ಕ್‌ನಲ್ಲೇ ಆಸಿಯಾ ಫಿರ್ದೋಸ್‌ಗೆ ಶಾಕ್ ಎದುರಾಗಿದೆ. ವಜ್ರದ ಬಾಕ್ಸ್ ಟಾಸ್ಕ್‌ನಲ್ಲಿ ತಪ್ಪು ಘೋಷಣೆಯಿಂದ ಆಸಿಯಾ ನೇರವಾಗಿ ಡಿಪಾರ್ಚರ್ ಲಿಸ್ಟ್‌ಗೆ ಸೇರಿ ಮತ್ತೆ ಫ್ಲೈಟ್‌ಗೆ ಮರಳಿದ್ದಾರೆ.

BIGBOSS ಸೀಸನ್‌ನ ಮೊದಲ ಟಾಸ್ಕ್‌ನಲ್ಲೇ ಆಸಿಯಾ ಫಿರ್ದೋಸ್ ಅವರಿಗೆ ಶಾಕ್ ಎದುರಾಗಿದೆ. ಮನೆಯೊಳಗೆ ಪ್ರವೇಶ ಪಡೆದ 8 ಸ್ಪರ್ಧಿಗಳ ಪೈಕಿ ಆಸಿಯಾ ಫಿರ್ದೋಸ್ ತಪ್ಪು ಘೋಷಣೆಯ ಕಾರಣದಿಂದ ಮತ್ತೆ ಫ್ಲೈಟ್‌ಗೆ ಮರಳುವ ಶಿಕ್ಷೆ ಪಡೆದಿದ್ದಾರೆ.

ಇದರ ಜೊತೆಗೆ ಈ ವಾರ ಆಸಿಯಾ ನೇರವಾಗಿ ಡಿಪಾರ್ಚರ್ ಲಿಸ್ಟ್‌ಗೆ ಸೇರುವಂತಾಗಿದೆ.

ವಜ್ರದ ಬಾಕ್ಸ್ ಟಾಸ್ಕ್‌ನಲ್ಲಿ ಟ್ವಿಸ್ಟ್

ಬಿಗ್‌ಬಾಸ್ ಮನೆಯಲ್ಲಿದ್ದ 8 ಸ್ಪರ್ಧಿಗಳಿಗೆ ತಲಾ ಒಂದೊಂದು ಟ್ರೆಜರ್ ಬಾಕ್ಸ್ ನೀಡಿದ್ದರು. ಆ ಬಾಕ್ಸ್‌ಗಳ ಪೈಕಿ ಒಂದು ಬಾಕ್ಸ್‌ನಲ್ಲಿ ವಜ್ರ ಇತ್ತು.

ವಜ್ರವಿದ್ದ ಬಾಕ್ಸ್ ಯಾರ ಬಳಿ ಇದೆ ಎಂಬ ರಹಸ್ಯವನ್ನು ಕೊನೆಯವರೆಗೂ ಕಾಪಾಡಿಕೊಂಡು, ಇತರ ಸ್ಪರ್ಧಿಗಳಿಗೆ ತಿಳಿಯದಂತೆ ಉಳಿಸಿಕೊಂಡರೆ ಆ ಸ್ಪರ್ಧಿಗೆ ವಿಐಪಿ ಅಧಿಕಾರದ ಜೊತೆಗೆ ಈ ವಾರ ಸೇಫ್ ಆಗುವ ಅವಕಾಶ ನೀಡಲಾಗಿತ್ತು.

ಈ ಟಾಸ್ಕ್‌ನಲ್ಲಿ ವಜ್ರವಿದ್ದ ಬಾಕ್ಸ್ ಗಗನ್ ಅವರ ಕೈ ಸೇರಿತ್ತು.


ಆಸಿಯಾ ಹೆಸರು ಹೇಳುವಂತೆ ಗಗನ್ ಸ್ಟ್ರಾಟರ್ಜಿ

ತಮ್ಮ ಬಳಿ ವಜ್ರವಿರುವ ವಿಚಾರವನ್ನು ಮುಚ್ಚಿಟ್ಟ ಗಗನ್, ತಮ್ಮದೇ ಸ್ಟ್ರಾಟರ್ಜಿ ಬಳಸಿಕೊಂಡು ಇತರ ಸ್ಪರ್ಧಿಗಳನ್ನು ಮನವೊಲಿಸಲು ಮುಂದಾದರು. ಇದರ ಪರಿಣಾಮವಾಗಿ ಹಲವು ಸ್ಪರ್ಧಿಗಳು ಆಸಿಯಾ ಫಿರ್ದೋಸ್ ಬಳಿ ವಜ್ರವಿದೆ ಎಂದು ಭಾವಿಸಿದರು.

ಹಲವರ ವೋಟ್‌ನ ಆಧಾರದ ಮೇಲೆ ಆಸಿಯಾ ಬಳಿ ವಜ್ರವಿದೆ ಎಂದು ತಪ್ಪು ಘೋಷಣೆ ಮಾಡಲಾಯಿತು. ಆದರೆ ವಾಸ್ತವವಾಗಿ ವಜ್ರವಿದ್ದ ಬಾಕ್ಸ್ ಗಗನ್ ಅವರ ಬಳಿಯೇ ಇತ್ತು.

ತಪ್ಪು ಘೋಷಣೆಯಿಂದ ಆಸಿಯಾಗೆ ಡಿಪಾರ್ಚರ್ ಶಾಕ್

ಯಾರೊಬ್ಬರೂ ಗಗನ್ ಅವರ ಹೆಸರನ್ನು ಹೇಳದ ಹಿನ್ನೆಲೆಯಲ್ಲಿ ತಪ್ಪು ಘೋಷಣೆ ಮಾಡಿದ ಆಸಿಯಾ ಫಿರ್ದೋಸ್ ಶಿಕ್ಷೆಗೆ ಗುರಿಯಾದರು. ಪರಿಣಾಮವಾಗಿ ಅವರು ನೇರವಾಗಿ ಡಿಪಾರ್ಚರ್ ಲಿಸ್ಟ್‌ಗೆ ಸೇರಬೇಕಾಯಿತು.

ಗಗನ್ ಅವರ ಸ್ಟ್ರಾಟರ್ಜಿ ಕಾರಣದಿಂದಲೇ ತಾನು ಟಾರ್ಗೆಟ್ ಆಗಿದ್ದೇನೆ ಎಂದು ಆರೋಪಿಸಿದ ಆಸಿಯಾ, ಗಗನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತೀವ್ರ ಬೇಸರ ಮತ್ತು ದುಃಖದೊಂದಿಗೆ ಆಸಿಯಾ ಮತ್ತೆ ಫ್ಲೈಟ್ ಹತ್ತುವಂತಾಯಿತು. ಬಿಗ್‌ಬಾಸ್ ಮನೆಯ ಮೊದಲ ಟಾಸ್ಕ್‌ನಲ್ಲೇ ನಡೆದ ಈ ಘಟನೆ ಇದೀಗ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.