ಬೆಂಗಳೂರಿನ ಮಂಜುನಾಥ್ ನಗರದ ಮೋದಿ ಆಸ್ಪತ್ರೆ ಬಳಿ ಸಂಜೆ ಸುರಿದ ಮಳೆಗೆ ಬೃಹತ್ ಮರ ನೆಲಕ್ಕುರುಳಿದೆ.

ಬೆಂಗಳೂರು: ಸಂಜೆ ಸುರಿದ ಮಳೆಗೆ ಮಂಜುನಾಥ್ ನಗರದ ಮೋದಿ ಆಸ್ಪತ್ರೆ ಬಳಿ ಬೃಹತ್ ಮರ ನೆಲಕ್ಕುರುಳಿದ್ದು, ಐದಾರು ಅಂಗಡಿಗಳು ಜಖಂ ಆಗಿರುವ ಘಟನೆ ನಡೆದಿದೆ.

ಬಹಳ ದಿನಗಳ ಬಳಿಕ ಸುರಿದ ಮಳೆಯಿಂದ ಆಸ್ಪತ್ರೆ ಸಮೀಪದಲ್ಲಿದ್ದ ಬೃಹತ್ ಮರ ಏಕಾಏಕಿ ನೆಲಕ್ಕುರುಳಿದೆ. ಮರದ ಕೆಳಗೆ ಇದ್ದ ಅಂಗಡಿಗಳಿಗೆ ಹಾನಿಯಾಗಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.


ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಮರ ರಸ್ತೆಗೆ ಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರಕ್ಕೂ ಅಡ್ಡಿಯಾಯಿತು.

ಬಳಿಕ ಮರವನ್ನು ರಸ್ತೆ ಬದಿಗೆ ತೆರವುಗೊಳಿಸಲಾಗಿದ್ದು, ಇದೀಗ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.