ತುಮಕೂರಿನಲ್ಲಿ ಬ್ಯಾಂಕ್ ನೌಕರರ ಪ್ರತಿಭಟನೆ | ಇಂದಿನಿಂದ 4 ದಿನ ಬ್ಯಾಂಕ್ ಬಂದ್ | 5 ದಿನಗಳ ಕೆಲಸಕ್ಕೆ ಆಗ್ರಹ
ವಾರದಲ್ಲಿ 6 ದಿನಗಳ ಕೆಲಸದ ಬದಲು ಪ್ರತಿ ಶನಿವಾರ ಹಾಗೂ ಭಾನುವಾರ ರಜೆ ನೀಡಿ, 5 ದಿನಗಳ ಕೆಲಸದ ಅವಧಿಯನ್ನು ಅಧಿಕೃತವಾಗಿ ಜಾರಿಗೊಳಿಸಬೇಕು ಹಾಗೂ ವಿವಿಧ ಬೇಡಿಗಳ ಈಡೇರಿಕೆಗೆ ಆಗ್ರಹಿಸಿ ಇಂದು ದೇಶಾದ್ಯಂತ ಬ್ಯಾಂಕ್ ನೌಕರರು ಬೃಹತ್ ಪ್ರತಿಭಟನೆಯನ್ನು ನಡೆಸಿದ್ರು. ಇತ್ತ ತುಮಕೂರಿನಲ್ಲಿ ಎಸ್ಬಿಐ ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು.
ತುಮಕೂರು ನಗರದ ಎಸ್ಬಿಐ ಬ್ಯಾಂಕ್ ಮುಂಭಾಗ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ರು. ವಾರಕ್ಕೆ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರಬೇಕು ನೌಕರರ ಪ್ರಮುಖ ಬೇಡಿಕೆಯಾಗಿದ್ದು, 2015ರಿಂದ
ಈ ಕುರಿತು ಚರ್ಚೆಗಳು ನಡೆಯುತ್ತಿವೆ. ಇನ್ನು 2024ರ ಒಪ್ಪಂದದಲ್ಲಿ ಉಳಿದ ಶನಿವಾರಗಳನ್ನು ರಜಾ ದಿನಗಳನ್ನಾಗಿ ಮಾಡುವ ಪ್ರಸ್ತಾವನೆಗೆ ಒಪ್ಪಿಗೆ ದೊರೆತಿತ್ತು ಎಂದು ಬ್ಯಾಂಕ್
ಯೂನಿಯನ್
ತಿಳಿಸಿದೆ. ಆದ್ರೆ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಸಂಬಂಧಿಸಿದಂತೆ ಸ್ಪಷ್ಟ ಭರವಸೆ ದೊರೆಯದ ಹಿನ್ನೆಲೆಯಲ್ಲಿ ಯಾವುದೇ ಒಪ್ಪಂದ ಸಾಧ್ಯವಾಗಲಿಲ್ಲ ಎಂದು ಬ್ಯಾಂಕ್
ಯೂನಿಯನ್
ಹೇಳಿದೆ. ಹೀಗಾಗಿ ಬ್ಯಾಂಕ್
ನೌಕರರು ಇಂದು ದೇಶಾದ್ಯಂತ ಬೀದಿಗಿಳಿದು ಪ್ರತಿಭಟನೆ ನಡೆಸಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ್ರು. ಇಂದು ಬ್ಯಾಂಕ್
ನೌಕರರು ಪ್ರತಿಭನಟೆ ಹಿನ್ನೆಲೆ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್
ಬಂದ್
ಆಗಲಿದ್ದು, ಹಣಕಾಸು ವ್ಯವಹಾರದ ಮೇಲೆ ಭಾರೀ ಪರಿಣಾಮ ಬೀರಲಿದೆ.
ಇನ್ನು ಇಂದು ಪ್ರತಿಭಟನೆ ನಡೆದಿದ್ದು, ಇದೇ ಸೆಪ್ಟೆಂಬರ್ 28, 29 ಮತ್ತು
30ರಂದು ಅಖಿಲ ಭಾರತ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿದೆ. ಅಲ್ದೇ ಬೇಡಿಕೆಗಳು ಈಡೇರದಿದ್ದರೆ ಅಕ್ಟೋಬರ್ 26ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಘೋಷಿಸಲಾಗಿದೆ.
ಒಟ್ನಲ್ಲಿ ಬ್ಯಾಂಕಿಂಗ್ ಸೇವೆ 5 ದಿನಗಳಿಗೆ ಘೋಷಿಸದಿದ್ರೆ ಮುಷ್ಕರದ ಎಚ್ಚರಿಕೆ ನೀಡಿದ್ದು, ಬ್ಯಾಂಕಿಂಗ್ ನೌಕರರ ಬೇಡಿಕೆ ಈಡೇರುತ್ತಾ ಇಲ್ವಾ..? ಅನ್ನೋದನ್ನ ಕಾದುನೋಡಬೇಕಿದೆ. ಒಂದು ವೇಳೆ ಮುಷ್ಕರ ಆದ್ರೆ ಬ್ಯಾಂಕಿಂಗ್ ಸೇವೆಗಳ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಒದೆ.